---Advertisement---

Jal Jeevan scheme 2025 :- ನಿಮ್ಮ ಮನೆಗೂ ಬರಲಿದೆ ಉಚಿತ ನೀರಿನ ಟ್ಯಾಂಕ್ ಮತ್ತು ಕೊಳಾಯಿ! ಈಗಲೇ ಅರ್ಜಿ ಸಲ್ಲಿಸಿ!

By: Xpress99

On: Wednesday, July 9, 2025 3:45 PM

Jal Jeevan scheme 2025 :- ನಿಮ್ಮ ಮನೆಗೂ ಬರಲಿದೆ ಉಚಿತ ನೀರಿನ ಟ್ಯಾಂಕ್ ಮತ್ತು ಕೊಳಾಯಿ! ಈಗಲೇ ಅರ್ಜಿ ಸಲ್ಲಿಸಿ!
Google News
Follow Us

Join WhatsApp

Join Now

Join Telegram

Join Now

---Advertisement---

Contents

Jal Jeevan scheme :- ಗ್ರಾಮೀಣ ಜನರಿಗೆ ಗುಡ್ ನ್ಯೂಸ್! ಇನ್ನು ಮುಂದೆ ಮನೆಮನೆಗೂ ಬರಲಿದೆ ನೀರಿನ ಟ್ಯಾಂಕ್ ಮತ್ತು ಕೊಳಯಿ ಸಂಪರ್ಕ! – ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.

ಇದನ್ನೂ ಓದಿ : LIC  Bima Sakhi Yojana 2025 : ಗ್ರಾಮೀಣ ಮಹಿಳೆಯರಿಗೆ ಸಿಹಿ ಸುದ್ದಿ! ಇಲ್ಲಿದೆ ಸಂಪೂರ್ಣ ಮಾಹಿತಿ!

Jal Jeevan scheme :- ಗ್ರಾಮೀಣ ಜನರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ. ಗ್ರಾಮೀಣ ಜನರು ಇನ್ನು ಮುಂದೆ ನೀರಿಗಾಗಿ ಬೇರೆ ಕಡೆಯಿಂದ ನೀರನ್ನು ತರುವ ಅವಶ್ಯಕತೆ ಇಲ್ಲ. ಏಕೆಂದರೆ ಕೇಂದ್ರ ಸರ್ಕಾರವೇ ಗ್ರಾಮೀಣ ಜನರ ಮನೆ ಮನೆಗೆ ಉಚಿತ ನೀರಿನ ಟ್ಯಾಂಕ್ ಮತ್ತು ಕೊಳಾಯಿ ಸಂಪರ್ಕ ನೀಡುತ್ತಿದೆ. ಪ್ರಧಾನ ಮಂತ್ರಿ ಮೋದಿಜಿ ಅವರೇ ಹೇಳಿದ ಹಾಗೆ “ ಹರ್ ಗರ್ ಜೆಲ್ “ ಅಂದರೆ ಮನೆಮನೆಗೂ ಕೂಡ ನೀರಿನ ಸಂಪರ್ಕ ಒದಗಿಸುವ  ಮಹತ್ವಪೂರ್ಣ ಯೋಜನೆ ಇದಾಗಿದೆ ( Jal Jeevan Scheme ). ಈ ಲೇಖನದಲ್ಲಿ ಉಚಿತ ನೀರಿನ ಟ್ಯಾಂಕ್ ಹಾಗೂ ಕೊಳಾಯಿ ಸಂಪರ್ಕ ಹೇಗೆ ಪಡೆಯುವುದು, ಅರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಕೊನೆಯ ದಿನಾಂಕ, ಈ ಯೋಜನೆಗೆ ಬೇಕಾಗಿರುವ ಅಗತ್ಯ ದಾಖಲೆಗಳನ್ನು ಸರಿಯಾಗಿ ವಿವರಿಸಲಾಗಿದೆ ಅರ್ಜಿದಾರರು ಈ ಲೇಖನವನ್ನು ಸಂಪೂರ್ಣವಾಗಿ ಓದಿ.

Jal Jeevan scheme :-  ಜಲ ಜೀವನ ಸ್ಕೀಮ್ ಎಂದರೇನು?

ಹರ್ ಗರ್ ಜೆಲ್ “ ಪ್ರಧಾನ ಮಂತ್ರಿ ಮೋದಿ ಅವರು ಇದನ್ನು ಹೇಳಿರುವುದನ್ನು ಕೇಳಿರುತ್ತೀರಿ ಇದರ ಅರ್ಥ ಎಂದರೆ ಪ್ರತಿ ಮನೆಗೂ ಕೂಡ ನೀರಿನ ಸಂಪರ್ಕ ನೀಡುವ ಮಹತ್ವ ಯೋಜನೆ ಇದಾಗಿದೆ. ಯೋಜನೆಯಿಂದ ಜನರು ನೀರಿಗಾಗಿ ಪರದಾಡುವ ಅವಶ್ಯಕತೆ ಇಲ್ಲ. ನಿಮ್ಮ ಮನೆಗೆ ಸ್ವಚ್ಛವಾದ ಕುಡಿಯಲು ಯೋಗ್ಯವಾದ ನೀರನ್ನು ನೀಡಲಾಗುತ್ತದೆ. 

ಈ ಯೋಜನೆಯಿಂದ ಲಭ್ಯವಾಗುವ ಸೌಲಭ್ಯಗಳು ?

 ಜಲ ಜೀವನ್ ಸ್ಕೀಮ್ :- ಈ ಯೋಜನೆಯಿಂದ ಗ್ರಾಮೀಣ ಜನರಿಗೆ ಸಿಗುವ ಸೌಲಭ್ಯಗಳನ್ನು ಕೆಳಗೆ ನೀಡಲಾಗಿದೆ.

  •  ಉಚಿತ ನೀರಿನ ಟ್ಯಾಂಕ್ :- ಮನೆಮನೆಗೂ ಉಚಿತವಾಗಿ ನೀರಿನ ಟ್ಯಾಂಕನ್ನು ನೀಡಲಾಗುತ್ತಿದೆ.
  •  ಕೊಳಾಯಿ ಸಂಪರ್ಕ :- ಮತ್ತು ಕೇಂದ್ರ ಸರ್ಕಾರದಿಂದಲೇ ಗ್ರಾಮೀಣ ಜನರಿಗೆ ಅವರ ಮನೆ ಮುಂದೆ ಉಚಿತವಾಗಿ ಕೊಳಾಯಿ ಸಂಪರ್ಕವನ್ನು ನೀಡಲಾಗುತ್ತದೆ.

ಜಲ ಜೀವನ ಸ್ಕೀಮ್ ಗೆ ಅರ್ಜಿ ಸಲ್ಲಿಸುವ ವಿಧಾನ?

ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅರ್ಜಿದಾರರು ಹತ್ತಿರದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ. ಅಥವಾ ನೀವೇ ಖುದ್ದಾಗಿ ಆನ್ಲೈನಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಮಾಹಿತಿಯನ್ನು ಕೆಳಗೆ ನೀಡಲಾಗಿದೆ ಅದನ್ನು ಸರಿಯಾಗಿ ಓದಿ.

Jal Jeevan scheme 2025 :- ನಿಮ್ಮ ಮನೆಗೂ ಬರಲಿದೆ ಉಚಿತ ನೀರಿನ ಟ್ಯಾಂಕ್ ಮತ್ತು ಕೊಳಾಯಿ! ಈಗಲೇ ಅರ್ಜಿ ಸಲ್ಲಿಸಿ!
Jal Jeevan scheme 2025

ಜಲ ಜೀವನ ಯೋಜನೆ ಗೆ  ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ?

  1.  Website :-ಮೊದಲು ಸರ್ಕಾರದ ಅಧಿಕೃತ https://jaljeevanmission.gov.in/ ವೆಬ್ ಸೈಟ್ ಗೆ ಭೇಟಿ ನೀಡಿ.
  2.  Login and register :-ವೆಬ್ಸೈಟ್ ಓಪನ್ ಆದ ನಂತರ ಲಾಗಿನ್ ಅಥವಾ ರಿಜಿಸ್ಟರ್ ಮಾಡಿಕೊಳ್ಳಿ. ಈ ವೆಬ್ಸೈಟ್ ಹೊಸದಾಗಿ ಬಳಸುವವರಾದರೆ ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ನಿಮ್ಮ ಇ-ಮೇಲ್ ಐಡಿಯನ್ನು ಬಳಸಿ ನೊಂದಾಯಿಸಿಕೊಳ್ಳಿ.
  3.  Apply for household tab connection :- ಲಾಗಿನ್ ಮಾಡಿದ ನಂತರ “service option” ಇದರ ಮೇಲೆ ಕ್ಲಿಕ್ ಮಾಡಿ ಅಥವಾ “Apply for household tab connection” ಈ ಬಟನಿನ ಮೇಲೆ ಕ್ಲಿಕ್ ಮಾಡಿಕೊಳ್ಳಿ.
  4.  ಅಲ್ಲಿ ಕೇಳುವ ವಿವರಗಳನ್ನು ಭರ್ತಿ ಮಾಡಿಕೊಳ್ಳಿ ಉದಾಹರಣೆ :- ಅರ್ಜಿದಾರರ ಹೆಸರು, ಮೊಬೈಲ್ ಸಂಖ್ಯೆ, ನಿಮ್ಮ ವಾಸ ಸ್ಥಳ ವಿವರ, ನಿಮ್ಮ ಜಿಲ್ಲೆ,ತಾಲೂಕು,ಗ್ರಾಮ, ಕುಟುಂಬದ ವಿವರಗಳು, ಇತ್ಯಾದಿ ಅಲ್ಲಿ ಕೇಳುವ ಎಲ್ಲಾ ದಾಖಲೆಗಳನ್ನು ನಮೂದಿಸಿಕೊಳ್ಳಿ.
  5.  Document upload:- ಅಲ್ಲಿ ಕೇಳುವ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ. ನೆನಪಿರಲಿ ನೀವು ಅಪ್ಲೋಡ್ ಮಾಡುವ ದಾಖಲೆಗಳು ( PDF, JPG,) ಈ ಫಾರ್ಮೆಟ್ ನಲ್ಲೆ ಅಪ್ಲೋಡ್ ಮಾಡಬೇಕು. ಮತ್ತು ನೀವು ಅಪ್ಲೋಡ್ ಮಾಡುವ ದಾಖಲೆಗಳು 2MB ಜಾಸ್ತಿ ಇರಬಾರದು.
  6.  ನಂತರ ನೀವು ಎಲ್ಲಾ ವಿವರಗಳನ್ನು ನಮೂದಿಸಿ ನಂತರ ಸರಿಯಾಗಿ ಇನ್ನೊಂದು ಸಲ ಪರಿಶೀಲಿಸಿ. ಸರಿಯಾಗಿ ಪರಿಶೀಲಿಸಿದ ನಂತರ ‘submit’ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ. ನಿಮ್ಮ ಅರ್ಜಿ ಪ್ರಕ್ರಿಯೆ ಮುಗಿಯುವುದು.

Jal Jeevan scheme : ನಿಮ್ಮ ಅರ್ಜಿ ಪ್ರಕ್ರಿಯೆ ಮುಗಿದ ನಂತರ ನಿಮಗೆ ಒಂದು ( reference number) ರೆಫರೆನ್ಸ್ ಸಂಖ್ಯೆ  ಬರುವುದು. ಈ ನಂಬರನ್ನು ಸರಿಯಾಗಿ ಜೋಪಾನ ಮಾಡಿ ಇಟ್ಟುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಈ ಯೋಜನೆಗೆ ಹೆಚ್ಚಿನ ಮಾಹಿತಿ ಬೇಕಾದರೆ ಈ ನಂಬರ್ ಉಪಯೋಗವಾಗುವುದು. ಮತ್ತು ಈ ನಂಬರಿಂದಲೇ ನಿಮ್ಮ ಮನೆಗೆ ಉಚಿತ ನೀರಿನ ಟ್ಯಾಂಕ್ ಮತ್ತು ಕೊಳಾಯಿ ಸಂಪರ್ಕ ಬರುವುದು. 

ಗಮನಿಸಿ :- ಒಂದು ವೇಳೆ ನಿಮಗೆ ಆನ್ಲೈನ್ ಅರ್ಜಿ ಮೂಲಕ ಅರ್ಜಿಯನ್ನು ಸಲ್ಲಿಸಲು ಬರುವುದಿಲ್ಲ ಎಂದರೆ ದಯವಿಟ್ಟು ನಿಮ್ಮ ಹತ್ತಿರದ ಸೈಬರ್ ಸೆಂಟರ್ ಅಥವಾ ನಿಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ! ಏಕೆಂದರೆ ಒಂದು ವೇಳೆ ನೀವು ತಪ್ಪು ವಿವರಗಳನ್ನು ಹಾಕಿ ಅರ್ಜಿ ಸಲ್ಲಿಸಿದರೆ ನಿಮ್ಮ ಅಜ್ಜಿಯನ್ನು ರಿಜೆಕ್ಟ್ ( reject ) ಮಾಡಲಾಗುವುದು.

Jal Jeevan scheme : ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ? ( documents)

ಅರ್ಜಿಯನ್ನು ಸಲ್ಲಿಸುವ ಅರ್ಜಿದಾರರು ಇಲ್ಲಿ ಹೇಳಿರುವ ಎಲ್ಲಾ ದಾಖಲೆಗಳನ್ನು ಅವರ ಹತ್ರ ಇರಬೇಕು. ಆಫ್ ಲೈನ್ ಅಥವಾ ಆನ್ಲೈನ್ ಇವೆರಡಕ್ಕೂ ಕೂಡ ಈ ದಾಖಲೆಗಳನ್ನು ಕೇಳಲಾಗುತ್ತದೆ.

  1.  ಅರ್ಜಿದಾರರ ಆಧಾರ್ ಕಾರ್ಡ್ 
  2.  ರೇಷನ್ ಕಾರ್ಡ್
  3.  ನಿವಾಸದ ಪ್ರಮಾಣ ಪತ್ರ 
  4.  ಜಾತಿ ಪ್ರಮಾಣ ಪತ್ರ
  5.  ಕುಟುಂಬದ ಆದಾಯ ಪ್ರಮಾಣ ಪತ್ರ
  6.  ಬ್ಯಾಂಕ್ ಖಾತೆ ವಿವರ
  7.  ನಿಮ್ಮ ಪಾಸ್ ಪೋರ್ಟ್ ಸೈಜ್ ಫೋಟೋ 2 ರಿಂದ 3.

Jal Jeevan scheme : ನಿಮ್ಮ ಅರ್ಜಿಯನ್ನು ಫಲಾನುಭವಿ ಪಟ್ಟಿಯಲ್ಲಿ ಹೇಗೆ ನೋಡುವುದು ? ( how to check application status )

ಅರ್ಜಿಯ ಸ್ಟೇಟಸ್ :- ನೀವು ಸಲ್ಲಿಸಿದ ಅರ್ಜಿ ಸ್ಟೇಟಸ್ ಅನ್ನು ಹೇಗೆ ನೋಡುವುದೆಂದರೆ , ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ( track application) ಅಥವಾ( application status) ಇದರ ಮೇಲೆ ಕ್ಲಿಕ್ ಮಾಡಿ ನಾನು ಮೊದಲೇ ಹೇಳಿರುವ ರೆಫರೆನ್ಸ್ ಸಂಖ್ಯೆ ಅಥವಾ ಆಧಾರ್ ಸಂಖ್ಯೆ ನಮೂದಿಸಿ ನಿಮ್ಮ ಸ್ಟೇಟಸ್ ನೋಡಬಹುದು.

Jal Jeevan scheme : ಈ ಯೋಜನೆಗೆ ನಿಮ್ಮ ಹೆಸರು ಇದೆಯೇ ಇಲ್ಲವೇ ಎಂದು ನೋಡಿಕೊಳ್ಳುವುದು ಹೇಗೆ? 

 ಈ ಯೋಜನೆಗೆ ನಿಮ್ಮ ಹೆಸರು ಆಯ್ಕೆ ಆಗಿದೆಯ ಎಂದು ತಿಳಿಯಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ “ beneficiary list “ ಇದರ ಮೇಲೆ ಕ್ಲಿಕ್ ಮಾಡಿ.ನಂತರ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ, ಹಾಗೂ ನಿಮ್ಮ ಜಿಲ್ಲೆ ಮತ್ತು ನಿಮ್ಮ ತಾಲೂಕುಗಳನ್ನು ಆಯ್ಕೆ ಮಾಡಿಕೊಳ್ಳಿ, ನಂತರ ನಿಮ್ಮ ಗ್ರಾಮ ಪಂಚಾಯಿತಿಯನ್ನು ಆಯ್ಕೆಮಾಡಿಕೊಳ್ಳಿ, ಆಯ್ಕೆ ಮಾಡಿದ ನಂತರ ಅಲ್ಲಿ download ಅಥವಾ View ಇವೆರಡು ಬಟನ್ ಕಾಣಿಸುವುದು ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಿ. ನಂತರ ಫಲಾನುಭವಿಗಳ ಪಟ್ಟಿಯನ್ನು ಪಿಡಿಎಫ್ ರೂಪದಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ಅಥವಾ ನೇರವಾಗಿ ವೀಕ್ಷಿಸಬಹುದು ನಿಮ್ಮ ಹೆಸರು ಪರಿಶಿಸಿಕೊಳ್ಳಿ. 

Jal Jeevan scheme : ಈ ಜಲಜೀವನ ಯೋಜನೆಯಿಂದ ಜನಸಾಮಾನ್ಯರಿಗೆ ಆಗುವ ಲಾಭಗಳು?

  • ಉಚಿತ ನೀರಿನ ಸೌಲಭ್ಯ :- ಗ್ರಾಮೀಣ ಜನರಿಗೆ ಕೇಂದ್ರ ಸರ್ಕಾರವೇ ಉಚಿತವಾಗಿ ನೀರಿನ ಟ್ಯಾಂಕ್ ಮತ್ತು ಕೊಳಾಯಿ ಸಂಪರ್ಕ ನೀಡುತ್ತಿದ್ದಾರೆ.
  • 24×7 ನೀರಿನ ಸೌಲಭ್ಯ :- ಈ ಯೋಜನೆಯಿಂದ ಮನೆಮನೆಗೂ ಕೂಡ 24 ಗಂಟೆ ಉಚಿತ ಕುಡಿಯಲು ಯೋಗ್ಯವಾದ  ನೀರನ್ನು ಬಿಡಲಾಗುವುದು. ಮತ್ತು ಗ್ರಾಮೀಣ ಜನರು ನೀರಿಗಾಗಿ ಪರದಾಡುವ ಸ್ಥಿತಿ ಕಮ್ಮಿಯಾಗುವುದು.

Jal Jeevan scheme : ಜಲ ಜೀವನ ಯೋಜನೆ ಕೇವಲ ಯೋಜನೆ ಮಾತ್ರವಲ್ಲ ಇದು ಹಲವಾರು ಗ್ರಾಮೀಣ ಜನರಿಗೆ ನೀರನ್ನು ಉಚಿತವಾಗಿ ಒದಗಿಸುವ ಮಹತ್ವಪೂರ್ಣ ಯೋಜನೆ ಇದಾಗಿದೆ. ಕೋಟ್ಯಾಂತರ ಜನರು ಈ ಯೋಜನೆಯನ್ನು ಪಡೆದುಕೊಂಡಿದ್ದಾರೆ.

ಮುಖ್ಯ ಸೂಚನೆಗಳು :-

ಯಾವುದೇ ರೀತಿಯ ವ್ಯಕ್ತಿ ಅಥವಾ ಏಜೆಂಟ್ ಗಳು ಈ ಅರ್ಜಿಗೆ ಶುಲ್ಕವನ್ನು ಕೇಳಿದರೆ ತಕ್ಷಣವೇ ತಳಿಯ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ದೂರು ನೀಡಿ!

Jal Jeevan scheme : ಅಧಿಕೃತ ಮಾಹಿತಿಗಾಗಿ ಈ ವೆಬ್ಸೈಟ್ಗೆ ಭೇಟಿ ನೀಡಿ :- https://jaljeevanmission.gov.in/ 

ಜಲ ಜೀವನ ಯೋಜನೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದರೆ ಸರ್ಕಾರದ ಅಧಿಕೃತ https://jaljeevanmission.gov.in/ ವೆಬ್ಸೈಟ್ ಗೆ ಭೇಟಿ ನೀಡ.! 

ಇದನ್ನೂ ಓದಿ : PM Vidya Lakshmi  Loan Scheme :- ಪಂಜಾಬ್ ನ್ಯಾಷನಲ್ ಬ್ಯಾಂಕ್ 2025ರ ಶಿಕ್ಷಣ ಸಾಲದ ಬಡ್ಡಿ ಇಳಿಕೆ!
ಇದೇ ರೀತಿಯ ಎಲ್ಲಾ ಉದ್ಯೋಗ, ಶಿಕ್ಷಣ, ಲೋನ್ಸ್, ಸರ್ಕಾರಿ ಯೋಜನೆ, ಇನ್ನು ಇತರೆ ಮಾಹಿತಿಯನ್ನು ತಿಳಿಯಲು ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ ಮತ್ತು ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಚಾನಲ್ ಗೆ ಕೂಡ ಫಾಲೋ ಮಾಡಿ ಇದರಿಂದ ನಾ ಹಾಕುವ ಪ್ರತಿಯೊಂದು ಪೋಸ್ಟ್ ಬೇಗನೆ ನಿಮಗೆ ತಲುಪುವುದು. 

FAQ ಜನರು ಕೇಳುವ ಹೆಚ್ಚುವರಿ ಪ್ರಶ್ನೆಗಳು? 

1.ಉಚಿತ ನೀರಿನ ಟ್ಯಾಂಕ್ ಮತ್ತು ಕೊಳಾಯಿ ಸಂಪರ್ಕ ಯಾರಿಗೆ ಲಭ್ಯವಿರುವುದು.

ಗ್ರಾಮೀಣ ಪ್ರದೇಶದಲ್ಲಿ ವಾಸವಿರುವ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಸಾಧ್ಯತೆ.

Q2. ಅರ್ಜಿ ಸಲ್ಲಿಸುವಾಗ ಯಾವ ಯಾವ ದಾಖಲೆಗಳನ್ನು ಕೇಳಲಾಗುವುದು?

A: ಅರ್ಜಿಯನ್ನು ಸಲ್ಲಿಸುವಾಗ ಆಧಾರ್ ಕಾರ್ಡ್ ರೇಷನ್ ಕಾರ್ಡ್ ನಿವಾಸ ಪ್ರಮಾಣ ಪತ್ರ ಬ್ಯಾಂಕ್ ಖಾತೆ ವಿವರ ಜಾತಿ ಪ್ರಮಾಣ ಪತ್ರ ಪಾಸ್ಪೋರ್ಟ್ ಸೈಜ್ ಫೋಟೋ ಇತ್ಯಾದಿ ದಾಖಲೆಗಳನ್ನು ಕೇಳಲಾಗುವುದು.

Q3. ನಿಮ್ಮ ಮನೆಗೆ ಮುಂಚಿತವಾಗಿಯೇ ಕೊಳಾಯಿ  ಇದ್ದರೆ ಈ ಯೋಜನೆ ಅರ್ಹರೆ?

A: ನಿಮ್ಮ ಮನೆ ಎದುರಿಗೆ ಮುಂಚಿತವಾಗಿಯೇ ಕೊಳಾಯಿ ಸಂಪರ್ಕವಿದ್ದರೆ ಈ ಯೋಜನೆಗೆ ನೀವು ಅನರ್ಹ, ನೀವು ಅರ್ಜಿಯನ್ನು ಸಲ್ಲಿಸುವುದಕ್ಕೆ ಬರುವುದಿಲ್ಲ.

Q4. ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

A: ಅರ್ಜಿಯನ್ನು ಎರಡು ರೀತಿಯಾಗಿ ಸಲ್ಲಿಸಬಹುದು ಮೊದಲನೆಯದು ನಿಮ್ಮ ಹತ್ತಿರದ ಸೈಬರ್ ಸೆಂಟರ್ ಅಥವಾ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು. ಅಥವಾ ಇನ್ನೊಂದು ನೀವೇ ಖುದ್ದಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

Q5. ಅರ್ಜಿಯ ಸ್ಟೇಟಸ್ ಅನ್ನು ಹೇಗೆ ತಿಳಿಯುವುದು?

A: ಅರ್ಜಿ ಸಲ್ಲಿಸಿದ ಅರ್ಜಿದಾರರು ಅರ್ಜಿಯ ಸ್ಥಿತಿಯನ್ನು ತಿಳಿಯಲು ಜಲಜೀವನ್ ಮಿಷನ್ ಎಂಬ track application ವಿಭಾಗಕ್ಕೆ ಹೋಗಿ ಅವರ ಅರ್ಜಿಯ ಸ್ಟೇಟಸ್ ಅನ್ನು ನೋಡಬಹುದು.

Q6. ಅರ್ಜಿದಾರರ ಹೆಸರು ಫಲನಬಾವಿ ಪಟ್ಟಿಯಲ್ಲಿ ಇದೆ ಎಂದು ಪರಿಶೀಲಿಸುವುದು ಹೇಗೆ?

A: ಅರ್ಜಿದಾರರು ಮೊದಲು ವೆಬ್ಸೈಟ್ ಗೆ ಹೋಗಿ ( beneficiary list) ಇದರ ಮೇಲೆ ಕ್ಲಿಕ್ ಮಾಡಬೇಕು ನಂತರ ನಿಮ್ಮ ರಾಜ್ಯ ಜಿಲ್ಲೆ ತಾಲೂಕು ಮತ್ತು ಗ್ರಾಮ ಆಯ್ಕೆ ಮಾಡಿ ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಿ. ಅಥವಾ ಅಲ್ಲಿ ವೀಕ್ಷಣೆ ಮಾಡಬಹುದು.

Q7 ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಶುಲ್ಕವಿದೆಯೇ?

A: ಇಲ್ಲ ಸ್ನೇಹಿತರೆ ಈ ಯೋಜನೆಯ ಸ್ವತಃ ಕೇಂದ್ರ ಸರ್ಕಾರವೇ ಉಚಿತವಾಗಿ ಗ್ರಾಮೀಣ ಜನರಿಗೆ ಉಚಿತ ಟ್ಯಾಂಕ್, ಕೊಳಾಯಿ ಸಂಪರ್ಕವನ್ನು ನೀಡುತ್ತಿದ್ದಾರೆ 

Q8. ನಗರ ಪ್ರದೇಶ ಮತ್ತು ಸ್ಲಂ ನಲ್ಲಿ ಇರುವ ಜನರಿಗೆ ಈ ಯೋಜನೆ ಲಭ್ಯವಿರುವುದೇ?

A: ಸದ್ಯಕ್ಕೆ ಈ ಯೋಜನೆ ಕೇವಲ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಲಭ್ಯವಿರುವುದು. ಮುಂದಿನ ದಿನಗಳಲ್ಲಿ ನಗರ ಪ್ರದೇಶದಲ್ಲಿ ಮತ್ತು ಸ್ಲಂ  ಏರಿಯಾದಲ್ಲಿ ಕೂಡ ಈ ಯೋಜನೆ ಬರಬಹುದು.

Q9. ನೀರಿನ ಟ್ಯಾಂಕ್ ಗಾತ್ರ ಎಷ್ಟಿರುವುದು?

A: ಬ್ಯಾಂಕಿನ ಗಾತ್ರ ಸಾಮಾನ್ಯವಾಗಿ 2000 ಲೀಟರ್ ರಿಂದ 5000 ಲೀಟರ್ ಒಳಗಿನ ಟ್ಯಾಂಕ್ ಇಡಲಾಗುತ್ತಿದೆ.

Q10. ಈ ಯೋಜನೆ ಶಾಲೆಗಳಿಗೆ ಮತ್ತು ಅಂಗನಾಡಿಗಳಿಗೂ ಲಭ್ಯವಿರುವುದೇ?

A: ಹೌದು ಸ್ನೇಹಿತರೆ , ಜಲ ಜೀವನ್ ಯೋಜನೆಯು ಎಲ್ಲಾ ರೀತಿಯ ಗ್ರಾಮೀಣ ಶಾಲೆಗಳಿಗೆ ಮತ್ತು ಅಂಗನವಾಡಿಗಳಿಗೆ ಸರ್ಕಾರಿ ಕೇಂದ್ರಗಳು ಮತ್ತು ಸಾರ್ವಜನಿಕ ಸಂಸ್ಥೆಗಳಿಗೆ ಉಚಿತವಾಗಿ ಕುಡಿಯುವ ನೀರಿನ ಸಂಪರ್ಕವನ್ನು ಒದಗಿಸುತ್ತದೆ.

ಅಧಿಕೃತ ಮಾಹಿತಿಗಾಗಿ ಈ ವೆಬ್ಸೈಟ್ಗೆ ಭೇಟಿ ನೀಡಿ :- https://jaljeevanmission.gov.in/ 

Xpress99

Karnataka No.1 Trusted News Patform, we will Cover All Topic's Example ( State-NewsGov SchemeEducationGov JobsAgricultureEntertainmentAutoFinance NewsTech) ETC... So Please visit our Xpress99.com News Website. We Will Give Valuable content for Reader.

For Feedback - xpressnewsofficialy@gmail.com

Join WhatsApp

Join Now

Join Telegram

Join Now

Leave a Comment