Contents
- 1 PM Vidya Lakshmi Loan Scheme :- ಪಿಎಂ ವಿದ್ಯಾಲಕ್ಷ್ಮಿ ಯೋಜನೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಕೊಟ್ಟ ಸಂಪೂರ್ಣ ವಿವರ! ಶಿಕ್ಷಣ ಸಾಲದ ಬಡ್ಡಿಯಲ್ಲಿ ದೊಡ್ಡ ಇಳಿಕೆ!
- 2 ಪಂಜಾಬ್ ನ್ಯಾಷನಲ್ ಬ್ಯಾಂಕ್ ದೊಡ್ಡದಾದ ನಿರ್ಧಾರ ತೆಗೆದುಕೊಂಡಿದೆ ಸುಮಾರು 20 BPS ಪಾಯಿಂಟ್ ಬಡ್ಡಿದರ ಇಳಿಕೆ ಮಾಡಿದ್ದಾರೆ!
- 3 ಯಾವ ಯಾವ ವಿದ್ಯಾರ್ಥಿಗಳು ಪಿಎಂ ವಿದ್ಯಾಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಬಹುದು?
- 4 PM Vidya Lakshmi :- ಅರ್ಹತೆ
- 5 ಪಂಜಾಬ್ ನ್ಯಾಷನಲ್ ಬ್ಯಾಂಕ್ ಹೊಸ ಬಡ್ಡಿ ದರಗಳು
- 6 ಪಿಎಂ ವಿದ್ಯಾಲಕ್ಷ್ಮಿ ಸಬ್ಸಿಡಿ: ಬಡ್ಡಿಗೆ ರಿಯಾಯಿತಿ! (Interest Subsidy)
- 7 1. ತಾಂತ್ರಿಕ/ವೃತ್ತಿಪರ ಕೋರ್ಸ್ಗಳಿಗೆ (Technical/Professional Courses – Engineering, Medicine, Management, CA, CS, IT, etc.):
- 8 2. ಇತರೆ ಕೋರ್ಸ್ಗಳಿಗೆ (Other Courses – Arts, Science, Commerce, Humanities, etc.):
- 9 ಗಮನಿಸಿ:
- 10 ಪಿಎಂ ವಿದ್ಯಾಲಕ್ಷ್ಮಿ ಯೋಜನಾ ಸಲಕ್ಕೆ ಅಗತ್ಯವಿರುವ ದಾಖಲೆ (Required Documents):
- 11 ಪಿಎಂ ವಿದ್ಯಾ ಲಕ್ಷ್ಮಿ ಸಾಲಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ? How to Apply
- 12 ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಡ್ಡಿದರ ಇಳಿಕೆಯ ವಿದ್ಯಾರ್ಥಿಗಳಿಗೆ ಪ್ರಯೋಜನಗಳು
- 13 ತೀರ್ಮಾನ
PM Vidya Lakshmi Loan Scheme :- ಪಿಎಂ ವಿದ್ಯಾಲಕ್ಷ್ಮಿ ಯೋಜನೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಕೊಟ್ಟ ಸಂಪೂರ್ಣ ವಿವರ! ಶಿಕ್ಷಣ ಸಾಲದ ಬಡ್ಡಿಯಲ್ಲಿ ದೊಡ್ಡ ಇಳಿಕೆ!
PM Vidya Lakshmi Loan Scheme :- ಭಾರತದಲ್ಲಿ ಅತಿ ಹೆಸರುವಾಸಿ ಬ್ಯಾಂಕ್ ಆದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಇದೀಗ ವಿದ್ಯಾರ್ಥಿಗಳಿಗೆ ಎಜುಕೇಶನ್ ಲೋನ್ ಇಂಟರೆಸ್ಟ್ ರೇಟ್ ( interest rate ) ಕಡಿಮೆಗೊಳಿಸಿದೆ. ಅದೆಷ್ಟೋ ಮಿಡಲ್ ಕ್ಲಾಸ್ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಈ ಪಂಜಾಬ್ ನ್ಯಾಷನಲ್ ಬ್ಯಾಂಕ್ ಒಂದು ಒಳ್ಳೆಯ ಸ್ಕೀಮ್ ಅನ್ನು ಜಾರಿ ತಂದಿದ್ದಾರೆ ಅದುವೇ ( PM ವಿದ್ಯಾಲಕ್ಷ್ಮಿ ಯೋಜನೆ ) ಈ ಪಿಎಂ ವಿದ್ಯಾ ಲಕ್ಷ್ಮಿ ಯೋಜನೆ ಅಡಿಯಲ್ಲಿ ಬರುವ ಶಿಕ್ಷಣ ಸಾಲ ( ಎಜುಕೇಶನ್ ಲೋನ್ ) ನಲಿ ಇರುವ ಇಂಟರೆಸ್ಟ್ ರೇಟನ್ನು ವಿದ್ಯಾರ್ಥಿಗಳಿಗೋಸ್ಕರ ಕಡಿಮೆ ಮಾಡಲಾಗಿದೆ. ಏಕೆಂದರೆ ವಿದ್ಯಾರ್ಥಿಗಳ ಮೇಲೆ ಬೀಳುವ ಆರ್ಥಿಕ ಹೊರೆಯನ್ನು ತಡೆಯಲು ಹಾಗೂ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡಲು ಈ ಯೋಜನೆ ಸಹಾಯವಾಗುವುದು. ಈ ಪಿಎಂ ವಿದ್ಯಾಲಕ್ಷ್ಮಿ ಯೋಜನೆ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ ಇದರಲ್ಲಿ ಈ ಎಜುಕೇಶನ್ ಲೋನ್ ಯಾರ್ಯಾರಿಗೆ ಅರ್ಹತೆ ಹಾಗೂ ಸಂಪೂರ್ಣ ವಿವರಗಳನ್ನು ಈ ಲೇಖನದಲ್ಲಿ ಬರೆದಿದ್ದೇವೆ ದಯವಿಟ್ಟು ಸಂಪೂರ್ಣವಾಗಿ ಓದಿ ಯೋಚನೆಗೆ ಅಪ್ಲೈ ಮಾಡಿ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ದೊಡ್ಡದಾದ ನಿರ್ಧಾರ ತೆಗೆದುಕೊಂಡಿದೆ ಸುಮಾರು 20 BPS ಪಾಯಿಂಟ್ ಬಡ್ಡಿದರ ಇಳಿಕೆ ಮಾಡಿದ್ದಾರೆ!
PM ವಿದ್ಯಾ ಲಕ್ಷ್ಮಿ ಯೋಜನೆ : ಜೂನ್ 1 2025 ರಿಂದ ಜಾರಿ ಆಗಿರುವ ಈ ಹೊಸ ನಿಯಮದಂತೆ! ಪಿಎಂ ವಿದ್ಯಾಲಕ್ಷ್ಮಿ ಯೋಜನೆ ಅಡಿಯಲ್ಲಿ ಬರುವ ಎಲ್ಲಾ ಹೊಸ ಶಿಕ್ಷಣ ಸಾಲದ ಬಡ್ಡಿಯಲ್ಲಿ ಸುಮಾರು 20 ಬೇಸಿಕ್ ಪಾಯಿಂಟ್ ಅಂದರೆ ( 20 BPS – basic points ) ಬಡ್ಡಿಯನ್ನು ಕಡಿತ ಎಂದು ಘೋಷಿಸಿದ್ದಾರೆ. ಸರಳವಾಗಿ ಹೇಳಬೇಕೆಂದರೆ ನಿಮ್ಮ ಬಡ್ಡಿಯಲ್ಲಿ 0.20% ಬಡ್ಡಿಯ ದರವನ್ನು ಇಳಿಕೆ ಮಾಡಿದ್ದಾರೆ. ಒಂದು ಲಕ್ಷ ರೂಪಾಯಿ ಸಾಲದ ಮೇಲೆ ವರ್ಷಕ್ಕೆ ಸುಮಾರು 2000 ಹೆಚ್ಚುವರಿ ಉಳಿತಾಯ ಎಂದರ್ಥ.
ಯಾವ ಯಾವ ವಿದ್ಯಾರ್ಥಿಗಳು ಪಿಎಂ ವಿದ್ಯಾಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಬಹುದು?
ಪ್ರಧಾನ ಮಂತ್ರಿ ವಿದ್ಯಲಕ್ಷ್ಮಿ ಯೋಜನೆ ಎಂದರ್ಥ. ಭಾರತ ಸರ್ಕಾರದ ಒಂದು ಪ್ರಮುಖ ಶಿಕ್ಷಣ ಸಾಲದ ಯೋಜನೆ ಇದು. ಭಾರತ ಸರ್ಕಾರವು ಬಡ ವಿದ್ಯಾರ್ಥಿಗಳಿಗೆ ಒಂದು ಉನ್ನತ ಶಿಕ್ಷಣ ನೀಡಲು ಸಹಕಾರ ಮಾಡಲು ಈ ಯೋಜನೆಯನ್ನು ತೆರೆದಿದ್ದಾರೆ. ಭಾರತಾದ್ಯಂತ ಗುರುತಿಸಲಾದ 860ಕ್ಕೂ ಹೆಚ್ಚು ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ (QSHEI – Quality Higher Educational Institutions) ಮೆಟ್ರಿಕ್ ಆಧಾರದ ಮೇಲೆ ಪ್ರವೇಶ ಪಡೆದು ಅಥವಾ ಪದವಿ ಅಥವಾ ಸ್ಥಾಪೋತರ ಪದವಿ, ಡಿಪ್ಲೋಮೋ ಕೋರ್ಸ್ ಗಳನ್ನು ಮಾಡುವ ಇಚ್ಛಿಸುವ ವಿದ್ಯಾರ್ಥಿಗಳಿಗೆ ಸುಲಭ ಮಾರ್ಗದಲ್ಲಿ ಶಿಕ್ಷಣ ಸಾಲ ಹಾಗೂ ಕಡಿಮೆ ಬಡ್ಡಿ ದರದಲ್ಲಿ ವಿದ್ಯಾರ್ಥಿಗಳಿಗೆ ಯೋಜನೆ ಸಹಾಯ ಮಾಡುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ಗೆ ಭೇಟಿ ನೀಡಿ (https://www.vidyalakshmi.co.in)
PM Vidya Lakshmi :- ಅರ್ಹತೆ
- ಭಾರತದ ನಾಗರಿಕಾಗಿರಬೇಕು( Indian citizen)
- ಅನಿವಾಸಿ ಭಾರತೀಯರು (NRIs), ಮತ್ತು ಭಾರತದ ವಿದೇಶಿ ನಾಗರಿಕರು (OCIs)
- ಕೋರ್ಸ್ : ಪದವಿ, ಸ್ನಾತಕೋತ್ತರ, ಡಿಪ್ಲೊಮಾ, ಅಥವಾ ವೃತ್ತಿಪರ ಪದವಿ ಪೂರ್ವ ಕೋರ್ಸ್ಗಳು. QSHEI ಸಂಸ್ಥೆಗಳಲ್ಲಿ (ಪಟ್ಟಿ ವೆಬ್ಸೈಟ್ನಲ್ಲಿ ಲಭ್ಯ)
- ಪ್ರವೇಶ: ಸಂಸ್ಥೆಯಲ್ಲಿ ಮೆರಿಟ್ ಮೂಲಕ ಪ್ರವೇಶ ಪಡೆದಿರಬೇಕು (ಆಫರ್ ಲೆಟರ್ ಅಗತ್ಯ).
ಪಂಜಾಬ್ ನ್ಯಾಷನಲ್ ಬ್ಯಾಂಕ್ ಹೊಸ ಬಡ್ಡಿ ದರಗಳು
ಪಿಎಂ ವಿದ್ಯಾಲಕ್ಷ್ಮಿ ಯೋಜನೆಯಡಿಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಂಸ್ಥೆಯು ಗುಣಮಟ್ಟದ (QSHEI ಗ್ರೂಪ್) ಮೇಲೆ ಅವಲಂಬಿಸಿವೆ. ಈಗಿನಿಂದ ಜಾರಿಯಾಗಿರುವ ದರಗಳು ಈ ರೀತಿ ಇವೆ:
QSHEI ಗ್ರೂಪ್ | ರೇಟಿಂಗ್ | ಸಂಸ್ಥೆಗಳ ಸಂಖ್ಯೆ | ಹೊಸ ಬಡ್ಡಿದರ (ವಾರ್ಷಿಕ) | ಹಿಂದಿನ ಬಡ್ಡಿದರ (ಅಂದಾಜು) | ಇಳಿಕೆ (bps) |
ಗ್ರೂಪ್ 1 | AAA | 85 | 7.50% | ~7.70% | 20 |
ಗ್ರೂಪ್ 2 | AA | 152 | 7.75% | ~7.95% | 20 |
ಗ್ರೂಪ್ 3 | A | 623 | 8.00% | ~8.20% | 20 |
ಗಮನಿಸಬೇಕಾದ ವಿಷಯ :
ಮಾರ್ಜಿನ್ : ಶಿಕ್ಷಣ ಸಾಲದ ಮಾರ್ಜಿನ್ ಎಂದರೆ ವಿದ್ಯಾರ್ಥಿ ಅಥವಾ ಕುಟುಂಬವು ಸ್ವಂತವಾಗಿ ಒದಗಿಸಬೇಕಾದ ಹಣದ ಭಾಗ
- ಗ್ರೂಪ್ 1 ಮತ್ತು ಗ್ರೂಪ್ 2 ಸಂಸ್ಥೆಗಳಲ್ಲಿ : ಯಾವುದೇ ರೀತಿಯ ಮತದ ಸಾಲಕ್ಕೆ ಮಾರ್ಜಿನ್ ಅಗತ್ಯವಿರುವುದಿಲ್ಲ! ( 0% )
- ಗ್ರೂಪ್ 3 ಸಂಸ್ಥೆಗಳು ಮತ್ತು ಇತರೆ : ನಾಲಕ್ಕು ಲಕ್ಷ ರೂಪಾಯಿ ವರಗಿನ ಸಾಲದಲ್ಲಿ ಯಾವುದೇ ಮಾರ್ಜಿನ್ ಅಗತ್ಯವಿರುವುದಿಲ್ಲ ಹಾಗೂ ನಾಲ್ಕು ಲಕ್ಷಕ್ಕಿಂತಲೂ ಹೆಚ್ಚಿನ ಸಲಕ್ಕೆ 5% ಮಾರ್ಜಿನ್ ಅಗತ್ಯ.
- ಸೆಕ್ಯೂರಿಟಿ : ಯಾವುದೇ ಸಾಲಕ್ಕೂ ಯಾವುದೇ ರೀತಿಯ ಅಡಮಾನ (Mortgage) ಹಾಗೂ ಭದ್ರತಾ ಠೇವಣಿ (Security Deposit) ಅಗತ್ಯವಿಲ್ಲ.
- ಜಂಟಿ ಸಾಲಗಳು: (Co-borrower) ಪೋಷಕರು ಅಥವಾ ಕಾನೂನು ಬದ್ಧ ಪೋಷಕರು ಜಂಟಿ ಸಾಲಗಾರರಾಗಿ ಸಹಿ ಹಾಕಬೇಕು!
ಪಿಎಂ ವಿದ್ಯಾಲಕ್ಷ್ಮಿ ಸಬ್ಸಿಡಿ: ಬಡ್ಡಿಗೆ ರಿಯಾಯಿತಿ! (Interest Subsidy)
ಪಿಎಂ ವಿದ್ಯಾಲಕ್ಷ್ಮಿ ಯೋಜನೆಯ ಅತ್ಯಂತ ಆಕರ್ಷಕ ಅಂಶವೆಂದರೆ ಬಡ್ಡಿ ರಿಯಾಯಿತಿ (Interest Subsidy – CSIS/CVSS). ಇದರ ಮೂಲಕ ಸರ್ಕಾರ ಸಾಲದ ಮೇಲಿನ ಬಡ್ಡಿಯ ಒಂದು ಭಾಗವನ್ನು ತಾನೇ ಭರಿಸುತ್ತದೆ, ವಿದ್ಯಾರ್ಥಿಯ ಮೇಲಿನ ಹೊರೆ ಇನ್ನೂ ಕಡಿಮೆಯಾಗುತ್ತದೆ. ರಿಯಾಯಿತಿ ಕುಟುಂಬದ ವಾರ್ಷಿಕ ಆದಾಯ ಮತ್ತು ಕೋರ್ಸ್ ಪ್ರಕಾರವನ್ನು ಅವಲಂಬಿಸಿದೆ:
1. ತಾಂತ್ರಿಕ/ವೃತ್ತಿಪರ ಕೋರ್ಸ್ಗಳಿಗೆ (Technical/Professional Courses – Engineering, Medicine, Management, CA, CS, IT, etc.):
ವಾರ್ಷಿಕ ಕುಟುಂಬದ ಆದಾಯ | ಬಡ್ಡಿ ರಿಯಾಯಿತಿ (Subsidy) | ಪರಿಣಾಮ (ಸಾಮಾನ್ಯವಾಗಿ) |
4.5 ಲಕ್ಷ ರೂ. ಗಿಂತ ಕಡಿಮೆ | 100% | ಸಾಲದ ಮೇಲೆ ಬಡ್ಡಿ ಇಲ್ಲ! |
4.5 ಲಕ್ಷ ರೂ. – 8 ಲಕ್ಷ ರೂ. | 3% | ಬಡ್ಡಿದರದಲ್ಲಿ 3% ರಿಯಾಯಿತಿ |
2. ಇತರೆ ಕೋರ್ಸ್ಗಳಿಗೆ (Other Courses – Arts, Science, Commerce, Humanities, etc.):
ವಾರ್ಷಿಕ ಕುಟುಂಬದ ಆದಾಯ | ಬಡ್ಡಿ ರಿಯಾಯಿತಿ (Subsidy) | ಪರಿಣಾಮ |
4.5 ಲಕ್ಷ ರೂ. ಗಿಂತ ಕಡಿಮೆ | 3% | ಬಡ್ಡಿದರದಲ್ಲಿ 3% ರಿಯಾಯಿತಿ |
4.5 ಲಕ್ಷ ರೂ. – 8 ಲಕ್ಷ ರೂ. | 3% | ಬಡ್ಡಿದರದಲ್ಲಿ 3% ರಿಯಾಯಿತಿ |
ಗಮನಿಸಿ:
- 100% ರಿಯಾಯಿತಿ ಪಡೆಯುವ ವಿದ್ಯಾರ್ಥಿಗಳು ಸಾಲದ ಮೂಲ ಮೊತ್ತ (Principal) ಮಾತ್ರವನ್ನು ಮರುಪಾವತಿ ಮಾಡಬೇಕು.
- ರಿಯಾಯಿತಿ ಸಾಮಾನ್ಯವಾಗಿ ಸಂಪೂರ್ಣ ಕೋರ್ಸ್ ಅವಧಿ + 1 ವರ್ಷ (ಅಥವಾ ಉದ್ಯೋಗ ಸಿಗುವವರೆಗೆ) + 6 ತಿಂಗಳುಗಳ ಕಾಲ ಲಭ್ಯವಿರುತ್ತದೆ.
- ರಿಯಾಯಿತಿಗೆ ಅರ್ಜಿ ಸಲ್ಲಿಸಲು ರಾಜ್ಯದ ಗೊತ್ತುಪಡಿಸಿದ ಸಾರ್ವಜನಿಕ ಪ್ರಾಧಿಕಾರದಿಂದ (ಗೆಜೆಟೆಡ್ ಆಫೀಸರ್) ಕುಟುಂಬದ ಆದಾಯದ ಪ್ರಮಾಣಪತ್ರ (Income Certificate) ಅತ್ಯಗತ್ಯ.

ಪಿಎಂ ವಿದ್ಯಾಲಕ್ಷ್ಮಿ ಯೋಜನಾ ಸಲಕ್ಕೆ ಅಗತ್ಯವಿರುವ ದಾಖಲೆ (Required Documents):
ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ ಯಾವುದೇ ಬ್ಯಾಂಕಿನಲ್ಲಿ ಪಿಎಂ ವಿದ್ಯಾಲಕ್ಷ್ಮಿ ಯೋಜನೆಯ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಇಲ್ಲಿ ಹೇಳಿರುವ ದಾಖಲೆಗಳನ್ನು ತೆಗೆದುಕೊಂಡು ಹೋಗಿ, ( ವರ್ಜಿನಲ್ ಹಾಗೂ ನಕಲು ಪ್ರತಿ ) ಎರಡನ್ನು ಹಿಡಿದುಕೊಂಡು ಹೋಗಿ.
- ವಿದ್ಯಾರ್ಥಿ KYC : ಆಧಾರ್ ಕಾರ್ಡ್, ಪಾನ್ ಕಾರ್ಡ್, ಅಡ್ರೆಸ್ ಪ್ರೂಫ್,
- ಶೈಕ್ಷಣಿಕ ದಾಖಲೆ : ಹಿಂದಿನ ಅಭ್ಯಾಸದ 10ನೇ ತರಗತಿ ಅಥವಾ 12ನೇ ತರಗತಿ ಪದವಿಯ ಮಾರ್ಕ್ಸ್ ಕಾರ್ಡ್, (Self-attested Mark Sheets) ನಕಲುಗಳು.
- ಪ್ರವೇಶ ಪರೀಕ್ಷೆ ಫಲಿತಾಂಶ: ಪ್ರವೇಶ ಪಡೆಯಲು ಆಧಾರವಾದ ಪ್ರವೇಶ ಪರೀಕ್ಷೆ (CET, NEET, JEE, CAT, GATE, ಇತ್ಯಾದಿ) ಫಲಿತಾಂಶದ ನಕಲು.
- ಸಂಸ್ಥೆಯ ಆಫರ್ ಲೆಟರ್: ಸಂಸ್ಥೆಯಿಂದ ಪಡೆದ ಮೂಲ ಪ್ರವೇಶ ಆಮಂತ್ರಣ ಪತ್ರ (Admission Offer Letter) ಶುಲ್ಕ ರಚನೆಯ (Fee Structure) ವಿವರಗಳೊಂದಿಗೆ.
- ಫೋಟೋಗಳು: ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಛಾಯಾಚಿತ್ರಗಳು (2-4).
- ಕುಟುಂಬದ ಆದಾಯದ ಪ್ರಮಾಣಪತ್ರ: ರಾಜ್ಯದ ಗೊತ್ತುಪಡಿಸಿದ ಸಾರ್ವಜನಿಕ ಪ್ರಾಧಿಕಾರದಿಂದ (Tahsildar/Revenue Inspector) ಪಡೆದ ಮೂಲ ಪ್ರತಿ.
- ಜಂಟಿ ಸಾಲಗಾರರ ದಾಖಲೆಗಳು: ಪೋಷಕ/ಪಾಲಕರ ಆಧಾರ್, ಪ್ಯಾನ್, ವಿಳಾಸ ಪುರಾವೆ, ಕೆವೈಸಿ ದಾಖಲೆಗಳು.
- ಹಿಂದಿನ ಸಾಲಗಳ ವಿವರ (ಇದ್ದರೆ): ಇತರೆ ಬ್ಯಾಂಕುಗಳಿಂದ ಪಡೆದ ಶಿಕ್ಷಣ ಅಥವಾ ಇತರೆ ಸಾಲಗಳ ವಿವರ.
ಪಿಎಂ ವಿದ್ಯಾ ಲಕ್ಷ್ಮಿ ಸಾಲಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ? How to Apply
- ನೋಂದಾಯಿಸಿ : ನಾನು ಹೇಳುವ ಈ https://www.vidyalakshmi.co.in ಪೋರ್ಟಲ್ ಗೆ ಭೇಟಿ ನೀಡಿ ವಿದ್ಯಾರ್ಥಿಯು ನೋಂದಾಯಿಸಿಕೊಳ್ಳಿ.
- ಅರ್ಜಿ ಭರ್ತಿ ಮಾಡಿ : ಆನ್ಲೈನ್ ಫಾರ್ಮಲ್ಲಿ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
- ಬ್ಯಾಂಕ್ ಮತ್ತು ಯೋಜನೆಯ ಆಯ್ಕೆ : ಸಾಲ ಬಯಸುವ ಬ್ಯಾಂಕನ್ನು (ಇಲ್ಲಿ ಪಿಎನ್ಬಿ) ಮತ್ತು ‘ಪಿಎಂ ವಿದ್ಯಾಲಕ್ಷ್ಮಿ ಯೋಜನೆ’ ಆಯ್ಕೆಮಾಡಿ.
- ಅಲ್ಲಿ ಕೇಳಲಾಗುವ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ ( ಸ್ಕ್ಯಾನ್ ಕಾಪಿಗಳು ಮಾತ್ರ ಅಪ್ಲೋಡ್ ಮಾಡಬೇಕು )
- ಆನ್ಲೈನ್ ಅರ್ಜಿಯನ್ನು ಸಲ್ಲಿಸಿ, ಸಲ್ಲಿಸಿದ ನಂತರ ಅಪ್ಲಿಕೇಶನ್ ಐಡಿ ( Application ಇದೆ )ಬರುವುದು.
- ಬ್ಯಾಂಕ್ ನಿಮ್ಮ ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ಮಾಡುತ್ತದೆ
- ಬ್ಯಾಂಕ್ ನಿಮ್ಮನ್ನು ಸಂಪರ್ಕ ಮಾಡಬಹುದು ಮೂಲ ದಾಖಲೆಗಳನ್ನು ಪರೀಕ್ಷಿಸಲು ನಿಮ್ಮ ಬ್ಯಾಂಕ್ ಬ್ರಾಂಚಿಗೆ ಭೇಟಿ ನೀಡಬೇಕು.
- ಎಲ್ಲವೂ ದಾಖಲೆಗಳು ಸರಿಯಾಗಿದ್ದರೆ ಬ್ಯಾಂಕ್ ತಕ್ಷಣವೇ ನಿಮ್ಮ ಖಾಸಗಿ ಖಾತೆಯಲ್ಲಿ ಸಾಲದ ಹಣವನ್ನು ವರ್ಗಾವಣೆ ಮಾಡುತ್ತಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಡ್ಡಿದರ ಇಳಿಕೆಯ ವಿದ್ಯಾರ್ಥಿಗಳಿಗೆ ಪ್ರಯೋಜನಗಳು
- ವಿದ್ಯಾರ್ಥಿಗಳಿಗೆ ಆರ್ಥಿಕ ಅವರೇ ಕಡಿಮೆಯಾಗುವುದು
- ಕಡಿಮೆ ಬಂಡವಾಳದಿಂದ ಹೆಚ್ಚು ವಿದ್ಯಾರ್ಥಿಗಳಿಗೆ ಸಾಲ ಲಭ್ಯವಿರುವುದು.
- ಸರ್ಕಾರವೇ ಹೇಳಿದಂತೆ ವಿದ್ಯಾರ್ಥಿಗಳಿಗೆ ಕನಸನ್ನು ನನಸು ಮಾಡಲು ಸಹಾಯಕಾರಿ.
ತೀರ್ಮಾನ
ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಪಿಎಂ ವಿದ್ಯಾಲಕ್ಷ್ಮಿ ಯೋಜನೆ ಅಡಿಯಲ್ಲಿ ಶಿಕ್ಷಣ ಸಾಲ ಬಡ್ಡಿ ದರವನ್ನು ಸುಮಾರು 20 ಬೇಸಿಕ್ ಪಾಯಿಂಟ್ ( 0.20%) ಕಡಿತ ಮಾಡಲಾಗಿದೆ ಭಾರತದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಇದು ಸಹಾಯ ಮಾಡುತ್ತದೆ ಹಾಗೂ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆದುಕೊಳ್ಳಲು ಬಹಳ ಅನುಕೂಲ ವಾಗುವುದು.
ಹೆಚ್ಚಿನ ಮಾಹಿತಿಗೆ:
- ಪಿಎಂ ವಿದ್ಯಾಲಕ್ಷ್ಮಿ ಅಧಿಕೃತ ವೆಬ್‌ಸೈಟ್: https://www.vidyalakshmi.co.in
- ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧಿಕೃತ ವೆಬ್‌ಸೈಟ್: https://www.pnbindia.in (ಶಿಕ್ಷಣ ಸಾಲ/Education Loan ವಿಭಾಗವನ್ನು ಪರಿಶೀಲಿಸಿ)
- ಅರ್ಹ QSHEI ಸಂಸ್ಥೆಗಳ ಪಟ್ಟಿ: ವಿದ್ಯಾಲಕ್ಷ್ಮಿ ಪೋರ್ಟಲ್‌ನಲ್ಲಿ ಲಭ್ಯ.
ಈ ಯೋಜನೆಯ ಹೆಚ್ಚಿನ ಮಾಹಿತಿಗಾಗಿ ನೀವು ಬ್ಯಾಂಕ್ ಗಳಿಗೆ ವಿಚಾರಿಸಿ ಇಲ್ಲವಾದರೆ ನಿಮ್ಮ ಹತ್ತಿರದ ಸೈಬರ್ ಸೆಂಟರ್ ( ಸೈಬರ್ ಸೆಂಟರ್ ) ಗಳಿಗೆ ಹೋಗಿ ಸರಿಯಾಗಿ ಮಾಹಿತಿ ತಿಳಿದುಕೊಳ್ಳಿ!
ಇದೇ ರೀತಿಯ ಲೋನ್, ಸ್ಕೀಮ್ ಹಾಗೂ ಉಪಯುಕ್ತ ಮಾಹಿತಿಗಾಗಿ ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ ಹಾಗೂ ನಮ್ಮ ಸೋಶಿಯಲ್ ಮೀಡಿಯಾಗಳಾದ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ ಕೂಡ ಜಾಯಿನ್ ಆಗಿ.