---Advertisement---

Aadhaar Card update Kannada : ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಕೊನೆಯ ಅವಕಾಶ! 

By: Xpress99

On: Monday, June 2, 2025 8:28 PM

Aadhaar Card update Kannada
Google News
Follow Us

Join WhatsApp

Join Now

Join Telegram

Join Now

---Advertisement---

Aadhaar Card update kannada : ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಕೊನೆಯ ಅವಕಾಶ! ಜೂನ್ 14, 2025 ರ ಒಳಗೆ ಅಪ್ಡೇಟ್ ಮಾಡಿಕೊಳ್ಳಿ ಇಲ್ಲವಾದರೆ ದಂಡ! 

Aadhaar Card update kannada : ಕೇಂದ್ರ ಸರ್ಕಾರವು ಜೂನ್ 14 2025 ರವರೆಗೆ ನಿಮ್ಮ ಆಧಾರ್ ಕಾರ್ಡ್ ವಿವರಗಳನ್ನು ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳಲು ಅವಕಾಶವನ್ನು ನೀಡಿದ್ದಾರೆ. ಈ ಅವಕಾಶವನ್ನು ಕಳೆದುಕೊಳ್ಳಬೇಡಿ ಏಕೆಂದರೆ ಇನ್ನು ಕೆಲವೇ ದಿನ ಅಂದರೆ ಜೂನ್ 14 2025ರ ಹೊರಗೆ ಮಾತ್ರ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲಾಗುವುದು. ಜೂನ್ 14ರ ನಂತರ ಅಪ್ಡೇಟ್ ಮಾಡಲು ಹೋದರೆ ಶುಲ್ಕ ಪಾವತಿಸ ಬೇಕಾಗಬಹುದು. ಆಧಾರ್ ಕಾರ್ಡ್ ಅಪ್ಡೇಟ್ ಮಾಡುವ ಅಭ್ಯರ್ಥಿಗಳು ದಯವಿಟ್ಟು ಈ ಲೇಖನವನ್ನು ಸಂಪೂರ್ಣವಾಗಿ ಓದಿ. 

ಪರಿಚಯ 

ಸ್ನೇಹಿತರೆ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಇರುವ ಎಲ್ಲಾ ವಿವರಗಳು ಸರಿಯಾಗಿದೆಯೇ ? ಎಂದು ಪರೀಕ್ಷಿಸಿಕೊಳ್ಳಿ. ನಿಮ್ಮ ವಿಳಾಸ, ಸಂಪರ್ಕ ಸಂಖ್ಯೆ, ಹೆಸರು, ನಿಮ್ಮ ಭಾವಚಿತ್ರ ( photo ) ಇದರಲ್ಲಿ ಯಾವುದಾದರೂ ಒಂದು ಸಮಸ್ಯೆ ಇದ್ದರೂ ಇಲ್ಲವೇ ಅಕ್ಷರದಲ್ಲಿ ವ್ಯತ್ಯಾಸ ಇದ್ದರೂ  ಕೂಡ ನೀವು( Free Aadhar update ) ಈ ಸ್ಕೀಮ್ ಗೆ ಅಪ್ಲೈ ಮಾಡಬಹುದು. UIDAIಯು  ನಿಮ್ಮ ಆಧಾರ್ ಕಾರ್ಡ್ ವಿವರವನ್ನು ಸರಿಯಾಗಿ, ನಮಿಕೃತವಾಗಿ ಇರುವುದರ ಮಹತ್ವವನ್ನು ನಿರಂತರವಾಗಿ ಹೇಳುತ್ತಲೇ ಇದೆ. ಇದಕ್ಕಾಗಿ ( Free Aadhar Card update ) ಎಂಬ ಅಮೂಲ್ಯವಾದ ಸೌಲಭ್ಯವನ್ನು ಕೇಂದ್ರ ಸರ್ಕಾರ ನೀಡಿದೆ. ಆದರೆ ಗಮನಿಸಿ! ಸ್ನೇಹಿತರೆ. ಸೌಲಭ್ಯಕ್ಕಾಗಿ ಜೂನ್ 14 2025 ರ ವರೆಗೆ ಮಾತ್ರ ಅವಕಾಶ. ಒಂದು ವೇಳೆ ಜೂನ್ 15ರ ನಂತರ ನವೀಕರಣ ಮಾಡಲು ಹೋದರೆ ₹ 50 ರಿಂದ  ₹100 ರೂಪಾಯಿ ವರೆಗೆ   ಶುಲ್ಕ ಪಾವತಿಸ ಬೇಕಾಗಬಹುದು. ದಯವಿಟ್ಟು ಆದಷ್ಟು ಬೇಗ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಕೊಳ್ಳಿ. 

ಈ ಲೇಖನದಲ್ಲಿ ಮನೆಯಲ್ಲಿ ಕುಳಿತು ಆಧಾರ್ ಕಾರ್ಡನ್ನು ಹೇಗೆ ಅಪ್ಡೇಟ್ ಮಾಡಿಕೊಳ್ಳಬಹುದು ಎಂದು ಸಂಪೂರ್ಣ ಮಾಹಿತಿ ನೀಡಿದ್ದಾರೆ ದಯವಿಟ್ಟು ಸರಿಯಾಗಿ ಓದಿಕೊಳ್ಳಿ. ಮಿಸ್ ಮಾಡಿಕೊಳ್ಳಬೇಡಿ.

ಆಧಾರ್ ಕಾರ್ಡ್ ಅಪ್ಡೇಟ್ ಅಗತ್ಯವಿದೆಯೇ ? 

ಹೌದು ಸ್ನೇಹಿತರೆ , ನಿಮ್ಮ ಆಧಾರ್ ಕಾರ್ಡ್ ನವೀಕರಿಸಿ 10 ವರ್ಷಗಳಾದರೆ ನೀವು ಮತ್ತೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲೇಬೇಕು, ಏಕೆಂದರೆ ಆಧಾರ್ ಕಾರ್ಡ್ ನಲ್ಲಿರುವ ನಿಮ್ಮ ಫೋಟೋ, ನಿಮ್ಮ ಮೊಬೈಲ್ ನಂಬರ್, ನಿಮ್ಮ ಸರಿಯಾದ ವಿಳಾಸ, ನಿಮ್ಮ ಜನ್ಮ ದಿನಾಂಕ, ಅಥವಾ ನಿಮ್ಮ ತಂದೆ ತಾಯಿಯ ಹೆಸರು, ಇದರಲ್ಲಿ ಯಾವುದಾದರೂ ಒಂದು ಮಾಹಿತಿ ತಪ್ಪಾದರೆ ಅದನ್ನು ತಿದ್ದುಪಡಿ ಮಾಡಲು  UIDAI ಅವಕಾಶವನ್ನು ಮಾಡಿಕೊಟ್ಟಿದ್ದಾರೆ. ಆಧಾರ್ ಕಾರ್ಡ್ ಅನ್ನು ಆನ್ಲೈನಲ್ಲಿ ಉಚಿತವಾಗಿ ಅಪ್ಡೇಟ್ ಮಾಡಲು ಜೂನ್ 14 ರಂದು ಕೊನೆಯ ಅವಕಾಶ.  ಜೂನ್ 14ರ ನಂತರ ಅಪ್ಡೇಟ್ ಮಾಡಲು ಹೋದರೆ ಸುಮಾರು ರೂ.50 ರಿಂದ ರೂ.100 ವರೆಗೆ ದಂಡ ಪಾವತಿ ಮಾಡಬೇಕಾಗಬಹುದು. 

ಗಮನಿಸಿ ಸ್ನೇಹಿತರೆ : ಈ  ( free Aadhar card update ) ಅಪ್ಡೇಟ್ ಮಾಡಲು ಕೇವಲ ಆನ್ಲೈನ್ ಮೂಲಕವೇ ಅಪ್ಡೇಟ್ ಮಾಡಿಕೊಳ್ಳಬೇಕು, ಯಾವುದೇ ರೀತಿಯ ( offline) ಆಫ್ಲೈನ್ ಮೂಲಕ ಅಪ್ಡೇಟ್ ಮಾಡಲಾಗುವುದಿಲ್ಲ. ಅಪ್ಡೇಟ್ ಮಾಡಲು My Aadhar  ಪೋರ್ಟಲ್ (https://myaadhaar.uidai.gov.inಈ ವೆಬ್ಸೈಟ್ ಮೂಲಕವೇ ಅಪ್ಡೇಟ್ ಮಾಡಿಕೊಳ್ಳತಕ್ಕದ್ದು. 

ಮನೆಯಲ್ಲೇ ಉಚಿತವಾಗಿ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಕೊಳ್ಳುವುದು ಹೇಗೆ ? 

ಸ್ನೇಹಿತರೆ  ನಿಮ್ಮ ಆಧಾರ್ ಕಾರ್ಡಿಗೆ ರಿಜಿಸ್ಟರ್ ಆಗಿರುವ ಮೊಬೈಲ್ ಸಂಖ್ಯೆ ಹಾಗೂ ಇಂಟರ್ನೆಟ್ ಸೌಲಭ್ಯವಿದ್ದರೆ ಸಾಕು. ಕೇವಲ 10 ನಿಮಿಷದಲ್ಲಿ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಅನ್ನು ನಿಮ್ಮ ಮನೆಯಲ್ಲೇ ಕುಳಿತುಕೊಂಡು ಉಚಿತವಾಗಿ ಮಾಡಿಕೊಳ್ಳಬಹುದು. 

ಗಮನಿಸಿ ಇದರಲ್ಲಿ ಬಯೋಮೆಟ್ರಿಕ್ ಅಂದರೆ ನಿಮ್ಮ (ಬೆರಳಿನ ಪ್ರಿಂಟ್ ಹಾಗೂ ನಿಮ್ಮ ಕಣ್ಣಿನ ಫೋಟೋ)

ಆನ್ಲೈನಲ್ಲಿ ಮಾಡಲು ಸಾಧ್ಯವಾಗುವುದಿಲ್ಲ ಅದಕ್ಕಾಗಿ ನೀವು ನಿಮ್ಮ ಹತ್ತಿರದ ಆಧಾರ್ ಕಾರ್ಡ್ ಕೇಂದ್ರಕ್ಕೆ ಭೇಟಿ ನೀಡಿ! ಇದರಲ್ಲಿ ಕೇವಲ ಹೆಸರು ವಿಳಾಸ ನಿಮ್ಮ ಜನ್ಮ ದಿನಾಂಕ ಮಾತ್ರ ಬದಲಿಸಬಹುದು.

  1. ನೀಡಿರುವ ಈ ಲಿಂಕ್ ಮೇಲೆ https://myaadhaar.uidai.gov.in
    ಕ್ಲಿಕ್ ಮಾಡಿ ಇಲ್ಲವಾದರೆ ನಿಮ್ಮ ಕಂಪ್ಯೂಟರ್ ಅಥವಾ ನಿಮ್ಮ ಸ್ಮಾರ್ಟ್ ಫೋನ್ ಬ್ರೌಸರ್ ಗೆ ಹೋಗಿ ಇದನ್ನು https://myaadhaar.uidai.gov.in
    ಗೂಗಲ್ ಸರ್ಚ್ ಮಾಡಿ! ಗಮನಿಸಿ ಈ ಲಿಂಕ್ UIDAI ಸರ್ಕಾರ ನಿಯಂತ್ರಿಸುವ ಅಧಿಕೃತ ವೆಬ್ಸೈಟ್ ಆಗಿದೆ.  ‘gov.in’ ಡೊಮೇನ್ ಇದೆ ಎಂದು ಖಚಿತಪಡಿಸಿಕೊಳ್ಳಿ. ಈ ಲಿಂಕ್ ಮೇಲೆ ಕ್ಲಿಕ್ ಮಾಡಿ my Aadhar Home page ಅನ್ನು  ಆರಿಸಿಕೊಳ್ಳಿ 
  1. ಹೋಂ ಪೇಜ್ ಓಪನ್ ಆದ ನಂತರ ಹೋಂ ಪೇಜ್ ನಲ್ಲಿರುವ ಮಿನಿಯು ಎಂಬ ಆಯ್ಕೆಯನ್ನು ಟ್ಯಾಪ್ ಮಾಡಿ ಹಾಗೂ ಟೈಪ್ ಮಾಡಿದ ನಂತರ ಡ್ರಾಪ್ಡೌನ್ ಬರುತ್ತದೆ ಅದರಲ್ಲಿ update your Aadhar ಅನು ಆಯ್ಕೆ ಮಾಡಿ. 
  1.  Update Aadhar details online ಪೇಜ್ ಗೆ ಹೋಗಿ, ಆಯ್ಕೆ ಮಾಡಿದ ನಂತರ ಹೊಸ ಪೇಜ್ ಗೆ ಕರೆದುಕೊಂಡು ಹೋಗುತ್ತೆ. ಈ ಪೇಜ್ ನಲ್ಲಿ update document ಬಟನ್ ವಿರುತ್ತದೆ. ಇದರಲ್ಲಿ ನಿಮ್ಮ ಹೆಸರು ವಿಳಾಸ ಅಥವಾ ಜನ್ಮ ದಿನಾಂಕ ನವೀಕರಿಸಲು ಈ ಬಟನ್ ಅನ್ನು ಸೆಲೆಕ್ಟ್ ಮಾಡಿ ಸರಿಯಾದ ಮಾಹಿತಿಯನ್ನು ಸಬ್ಮಿಟ್ ಮಾಡಿ. 
  1.  ನಿಮ್ಮ ಆಧಾರ್ ವಿವರಗಳನ್ನು ನಮೂದಿಸಿ : Document Update’ ಕ್ಲಿಕ್ ಮಾಡಿದ ನಂತರ ಲಾಗಿನ್ ಪೇಜ್  ಓಪನ್ ಆಗುವುದು. ನಿಮ್ಮ 12 ಸಂಖ್ಯೆಯ ಆಧಾರ್ ನಂಬರ್ ನನ್ನು ನಮೂಂದಿಸಿ. ಅಲ್ಲಿ ತೋರಿಸುವ ಕ್ಯಾಪ್ಚ ಕೋಡನ್ನು ಸರಿಯಾಗಿ ಬರೆಯಿರಿ. ನಂತರ  send OTP ಇದರ ಮೇಲೆ ಕ್ಲಿಕ್ ಮಾಡಿ. 
  2.  ಓಟಿಪಿ ಬಂದ ಕೂಡಲೇ ತಕ್ಷಣವೇ  ಲಾಗಿನ್ ಮಾಡಿ. 
  1.  ಆಧಾರ್ ಕಾರ್ಡಿಗೆ ನವೀಕರಿಸಲು ಬೇಕಾದ ವಿವರಗಳನ್ನು ಆಯ್ಕೆಮಾಡಿಕೊಳ್ಳಿ. ಲಾಗಿನ್ ಆದ ನಂತರ ನೀವು ಯಾವ ವಿವರಗಳನ್ನು ನವೀಕರಿಸಲು ಬಯಸುತ್ತೀರೋ ಅದರ ಮೇಲೆ ಕ್ಲಿಕ್ ಮಾಡಿ. ಉದಾಹರಣೆ : ಹೆಸರು, ವಿಳಾಸ,ಜನ್ಮ ದಿನಾಂಕ,ಮೊಬೈಲ್ ಸಂಖ್ಯೆ, ನೆನಪಿಡಿ ಸ್ನೇಹಿತರೇ , ನವೀಕರಿಸಬೇಕಾದ ಸಮಯದಲ್ಲಿ ಒಂದು ವಿವರಗಳ ಮಾತ್ರ ನವೀಕರಿಸಬಹುದು. 
  1.  ಹೊಸ ಮಾಹಿತಿಯನ್ನು ಸರಿಯಾಗಿ ನಮೂದಿಸಿ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿಕೊಳ್ಳಿ ನೀವು ಆರಿಸಿಕೊಂಡ ವಿವರಗಳನ್ನು ಉದಾಹರಣೆ ನಿಮ್ಮ ( ಹೆಸರು,ವಿಳಾಸ  )ಹರಿಸಿಕೊಳ್ಳಿ. ನಂತರ ಹೊಸ ಪೇಜ್ ತೆರೆಯುತ್ತದೆ. ನಿಮ್ಮ ಹೊಸ ಮಾಹಿತಿಯನ್ನು ಎಚ್ಚರದಿಂದ ನಮೂದಿಸಿ. ಹಾಗೂ ಕೇಳಲಾಗುವ ಡಾಕ್ಯುಮೆಂಟ್ಸ್ ಅನ್ನು ಅಲ್ಲಿಯೇ ಅಪ್ಲೋಡ್ ಮಾಡಿಕೊಳ್ಳಿ ನೆನಪಿಡಿ ಸ್ನೇಹಿತರೇ , ನಿಮ್ಮ ಡಾಕ್ಯುಮೆಂಟ್ PNG, JPEG, PDF, ಫಾರ್ಮೆಟ್ ನಲ್ಲಿ ಇರಬೇಕು, ಹಾಗೂ ನಿಮ್ಮ ದಾಖಲೆಗಳು 2 MB ಗಿಂತ ಕಡಿಮೆ ಇರಬೇಕು. ನಿಮ್ಮ ದಾಖಲೆಗಳನ್ನು ಖಚಿತಪಡಿಸಿ ಈ ಹಂತವನ್ನು ಪೂರ್ಣಗೊಳಿಸಿ.
  2.  ಸಬ್ಮಿಟ್ ಮಾಡಿ ಮತ್ತು URN ನಂಬರನ್ನು ಸಂಗ್ರಹಿಸಬೇಕು. ನಿಮ್ಮ ಎಲ್ಲಾ ಮಾಹಿತಿಯನ್ನು ಸರಿಯಾಗಿ ಪರಿಶೀಲಿಸಿ ಹಾಗೂ ಪರಿಶೀಲಿಸಿದ ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ. ಕ್ಲಿಕ್ ಮಾಡಿದ ನಂತರ ನಿಮ್ಮ ವಿನಂತಿ ಯಶಸ್ವಿಯಾಗಿದೆ ಎಂದು ನಿಮ್ಮ ಸ್ಕ್ರೀನ್ ಮೇಲೆ ಕಾಣಿಸುತ್ತದೆ ಹಾಗೂ ನಿಮ್ಮ ಮೊಬೈಲ್ಗೆ ಎಸ್ಎಂಎಸ್ ಕೂಡ ಬರುವುದು  . ಇದು ನಿಮ್ಮ ನವೀಕರಣ ವಿನಂತಿಯ ಯುನಿಕ್ ರೆಫರೆನ್ಸ್ ನಂಬರ್ (URN) ಅನ್ನು ಹೊಂದಿರುತ್ತದೆ. ಉದಾ: ‘URN:6543210987654321’. ಈ URN ಅನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಿ. ಇದು ನಿಮ್ಮ ವಿನಂತಿಯ ಸ್ಥಿತಿಯನ್ನು ಟ್ರ್ಯಾಕ್ ಮಾಡಲು ಬಹಳ ಮುಖ್ಯ

 ಜೂನ್ 14, 2025 ಕೊನೆಯ ದಿನಾಂಕವೇ ? 

ಹೌದು ಸ್ನೇಹಿತರೆ , ಆಧಾರ್ ಕಾರ್ಡ್ ಮಾಡಲು ಬಯಸುವ ಅಭ್ಯರ್ಥಿಗಳು ಜೂನ್ 14ರ ವರೆಗೆ ಅಪ್ಡೇಟ್ ಮಾಡಿಕೊಳ್ಳುತಕ್ಕದ್ದು. ದಿನಾಂಕ ಮೀರಿದರೆ ಶುಲ್ಕ ತೆಗೆದುಕೊಳ್ಳಲಾಗುವುದು. 

ಗಮನಿಸಿ ನಿಮ್ಮ ಆಧಾರ್ ಕಾರ್ಡ್ ನವೀಕರಿಸಲು ಬಂದಿರುವಂತ ಓಟಿಪಿಯನ್ನು ಯಾರಿಗೂ ಕೂಡ ಶೇರ್ ಅಥವಾ ವರ್ಗಾಯಿಸುವಂತಿಲ್ಲ. ಓಟಿಪಿಯನ್ನು ನಿಮ್ಮ ಕೆಲಸ ಆದ ನಂತರ ಡಿಲೀಟ್ ಮಾಡಿದರೆ ಬಹಳ ಒಳ್ಳೆಯದು. 

ಈ ಲೇಖನದಲ್ಲಿ ಯಾವುದೇ ಸಲಹೆವಿದ್ದರೆ ಯಾವುದೇ ಸಂದೇಹವಿದ್ದರೆ ಅಥವಾ ಇತ್ತೀಚಿನ ಅಪ್‌ಡೇಟ್‌ಗಳಿಗಾಗಿ, ಯಾವಾಗಲೂ UIDAI ಯ ಅಧಿಕೃತ ವೆಬ್‌ಸೈಟ್ https://uidai.gov.in ಅಥವಾ ಅವರ ಅಧಿಕೃತ X (Twitter) ಹ್ಯಾಂಡಲ್ @UIDAI ಅನ್ನು ಪರಿಶೀಲಿಸಿ. ನಕಲಿ ವೆಬ್‌ಸೈಟ್‌ಗಳು ಮತ್ತು ಫೋನ್ ಕಾಲ್‌ಗಳಿಂದ ಎಚ್ಚರಿಕೆ ಇರಲಿ. UIDAI ಎಂದಿಗೂ ಪಾಸ್‌ವರ್ಡ್ ಅಥವಾ OTP ಕೇಳುವುದಿಲ್ಲ.

Xpress99

Karnataka No.1 Trusted News Patform, we will Cover All Topic's Example ( State-NewsGov SchemeEducationGov JobsAgricultureEntertainmentAutoFinance NewsTech) ETC... So Please visit our Xpress99.com News Website. We Will Give Valuable content for Reader.

For Feedback - xpressnewsofficialy@gmail.com

Join WhatsApp

Join Now

Join Telegram

Join Now

Leave a Comment